ಸಾಮಾಜಿಕ ಜಾಲತಾಣಗಳನ್ನ ಯಾವ ರೀತಿ ಉಪಯೋಗಿಸಿಕೊಳ್ಳಬೇಕು ಎಂಬುದಕ್ಕೆ ಉತ್ತಮ ಉದಾಹರಣೆ ಈ ಹಳ್ಳಿ ಹುಡುಗ.
ಹೆಸರು :- ಮಹದೇವಪ್ರಸಾದ್ (ಮನು)
ಊರು :- ಧರ್ಮಯ್ಯನಹುಂಡಿ ಗ್ರಾಮ
ಟಿ.ನರಸೀಪುರ ತಾಲ್ಲೂಕು
ಮೈಸೂರು ಜಿಲ್ಲೆ
ಟಿ.ನರಸೀಪುರ ಕಾಲೇಜೊಂದರಲ್ಲಿ ಫೈನಲ್ ಇಯರ್ Bcom ವ್ಯಾಸಂಗ ಮಾಡುತ್ತಿದ್ದಾರೆ.ಇವರ ತಂದೆ ಕೃಷಿಕರು (ರೈತರು).
ಈ ಹುಡುಗನಿಗೆ ನಮ್ಮ ರೈತರ ಬಗ್ಗೆ ಅಪಾರ ಕಾಳಜಿ.ಕಳೆದ ಕೆಲವು ದಿನಗಳ ಹಿಂದೆ ಯು ಟುಬ್ ನಲ್ಲಿ ರೈತರಿಗೆ ಸಂಬಂಧಿಸಿದ,ಹಳೆಯ ಉಪಯೋಗಕ್ಕೆ ಬಾರದ ಸೈಕಲ್ ಅನ್ನು ಉಪಯೋಗಿಸಿಕೊಂಡು, ಜಮೀನಿನಲ್ಲಿ ಸುಲಭವಾಗಿ ಕಳೆ ಕೀಳುವುದರ ಬಗ್ಗೆ ಇದ್ದ ವಿಡಿಯೋ ನೋಡಿ,ಅದರಿಂದ ಸ್ಪೂರ್ತಿಗೊಂಡು,ತಾನು ಯಾಕೆ ಪ್ರಯತ್ನ ಮಾಡಬಾರದು ಎಂದು ನಿರ್ಧರಿಸಿ,ಪ್ರಯತ್ನಿಸಿ ಅದರಲ್ಲಿ ಯಶಸ್ವಿಯಾಗಿ,ಅದರಿಂದ ಪ್ರಯೋಜನವನ್ನು ಪಡೆದುಕೊಂಡಿದ್ದಾರೆ.ಇದನ್ನ ನನ್ನ ಬಳಿ ಹೇಳಿದಾಗ,ನನಗೂ ತುಂಬಾ ಖುಷಿಯಾಯ್ತು,ಆಗ ನಾನು ಅವರಿಗೆ ಇದರ ಒಂದು ವಿಡಿಯೋ ಮಾಡಿ,ಇದರಿಂದ ಇನ್ನೂ ಹಲವು ರೈತರಿಗೆ ಪ್ರಯೋಜನವಾದರೂ ಆಗಬಹುದು ಎಂದು ಹೇಳಿದ್ದಕ್ಕಾಗಿ ಅದರ ವಿಡಿಯೋ ಮಾಡಿದ್ದು,ದಯವಿಟ್ಟು ಎಲ್ಲರೂ ಒಮ್ಮೆ ನೋಡಿ.ಇದು ಅವರ ಸ್ವಯಂ ಆಲೋಚನೆಯಿಂದ ಬಂದ ಐಡಿಯಾ ಅಲ್ಲದಿದ್ದರೂ,ಸಾಮಾಜಿಕ ಜಾಲತಾಣಗಳನ್ನ ಉಪಯೋಗಿಸಿಕೊಂಡು ಈ ರೀತಿಯ ಒಳ್ಳೆ ಕೆಲಸಗಳನ್ನು ಮಾಡಬಹುದು ಎಂಬುದನ್ನು ತೋರಿಸಿಕೊಟ್ಟ ಈ ಯುವಕನಿಗೆ ನಿಮ್ಮೆಲ್ಲರ ಸಹಕಾರ ಹಾಗೂ ಆಶಿರ್ವಾದ ಇರಲಿ.ಈ ಯುವಕ ನಾನು ಕೆಲಸ ಮಾಡುವ ಹಳ್ಳಿಯವರು ಎಂಬುದು ನನಗೆ ಸಂತೋಷ.
ಇಂತಹ ಚಿಕ್ಕ ಚಿಕ್ಕ ಕೆಲಸಗಳೇ ಮುಂದೆ ದೊಡ್ಡ ದೊಡ್ಡ ಸಾಧನೆಗೆ ಸ್ಪೂರ್ತಿ.ಎಲ್ಲರಿಗೂ ಧನ್ಯವಾದಗಳು.